ಸಪ್ತಮಿ ತಿಥಿ

0 0 0
                                    

🕉 ಹರಿ ಓಂ
🙏 ರಥ ಸಪ್ತಮಿ ಆಚರಣೆ ರಥಾ ಸಪ್ತಮಿ... ದಯವಿಟ್ಟು ತಪ್ಪದೆ ಓದಿ

ಮಾಘಮಾಸದ ಶುಕ್ಲಪಕ್ಷ ಸಪ್ತಮಿಯಂದು ಸೂರ್ಯನ ಜನನ ವಾಯಿತು. ಕಶ್ಯಪ ಮತ್ತು ಅದಿತಿ ದೇವಿಯರ ಪುತ್ರ.

ಹುಟ್ಟಿದೊಡನೆ ಏಳು ಅಶ್ವಗಳು ಎಳೆಯುವ ರಥವನ್ನೇರಿ , ಏಳು ಲೋಕಗಳ ಸಂಚಾರಕ್ಕೆ ಹೊರಟ. ಆದಕ್ಕೆ ಇದು ರಥಸಪ್ತಮಿ.

ಶಿವನಿಗೆ ಹೇಗೆ ‘ಬಿಲ್ವಪತ್ರ ’ಪ್ರಿಯವೊ, ವಿಷ್ಣವಿಗೆ’ತುಳಸಿ’ ಪ್ರಿಯವೊ ಹಾಗೆ ಸೂರ್ಯನಿಗೆ ‘ಅರ್ಕ’ದ ಎಲೆ ಪ್ರಿಯವಂತೆ.

🎙 ಸ್ನಾನ ಕ್ರಮ::--

           ಆಚಮನಾದಿಗಳನ್ನು ಮಾಡಿ, ಸಂಕಲ್ಪದಲ್ಲಿ *'......ಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರಿತ್ಯರ್ಥಂ ರಥಸಪ್ತಮೀ ಮಹಾಪರ್ವಕಾಲನಿಮಿತ್ತ ಅರುಣೋದಯೇ ಮಾಘಸ್ನಾನಂ ಕರಿಷ್ಯೇ'/* ಎಂದು ಸೇರಿಸಿಕೊಳ್ಳಬೇಕು.

ನದಿಗಳಲ್ಲಿ ಪ್ರವಾಹಾಭಿಮುಖವಾಗಿ, ಇತರ ಜಲಾಶಯಗಳಲ್ಲಿ ಸೂರ್ಯಾಭಿಮುಖವಾಗಿ ಮುಳುಗಬೇಕು. ಪ್ರತೀ ಒಬ್ಬರು ಮಾಡಲೇ ಬೇಕಾದ ವೃತ ಇದು. ರಥ ಸಪ್ತಮೀ ದಿನ ತೀರ್ಥ ಸ್ನಾನಕ್ಕೆ ಬಹಳ ಮಹತ್ವವಿದೆ . ಆದಿನ ಎಲ್ಲಿಯೂ ತೀರ್ಥಸ್ನಾನಕ್ಕೆ ಹೋಗಲು ಅನಕೂಲವಾಗದಿದ್ದರೆ ಮನೆಯಲ್ಲೇ ಸ್ನಾನದ ವಿಧಿಯನ್ನು ಮಾಡಿ ...

ರಥಸಪ್ತಮಿ ದಿನ ಏಳು ಅರ್ಕದ ಎಲೆಗಳನ್ನು (ಒಂದು ತಲೆಯ ಮೇಲೆ, ಎರಡೆರಡುಭುಜಗಳು಼, ಎದೆ,  ಪಾದಗಳಲ್ಲಿ ಎರಡು, ಹಾಗೂ ತೊಡೆಗಳಮೇಲೆ) ಇಟ್ಟು ಕೊಂಡು ಏಳು ಸಲ ನದಿ ನೀರಿನಲ್ಲಿ ಅಥವಾ ಸರೋವರಗಳಲ್ಲಿ ಮುಳುಗಿ ಸ್ನಾನ ಮಾಡಿದರೆ ಏಳು ಜನ್ಮಗಳ ಷಾಪ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ.ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು಼, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

🎙 ಪಾಪಗಳಲ್ಲಿ ಏಳು ವಿಧ ::--

1.ಈ ಜನ್ಮದಲ್ಲಿ ಮಾಡಿದ ಪಾಪಗಳು,
2. ಹಿಂದಿನ ಆರು ಜನ್ಮಗಳ ಪಾಪಗಳು,
3. ಕಾಯ(ಶರೀರದ/ದೇಹದ) ಮೂಲಕಮಾಡಿದ ಪಾಪಗಳು
4. ವಾಚ( ಮಾತಿನ) ಮೂಲಕ ಮಾಡಿದ ಪಾಪಗಳು
5. ಮನಸಾ(ಮನಸಿಸನ) ಮೂಲಕ ಮಾಡಿದ ಪಾಪಗಳು 6.ತಿಳಿದು ಮಾಡಿದ ಪಾಪಗಳು
7. ತಿಳಿಯದೇ ಮಾಡಿದ ಪಾಪಗಳು.

🎙 ಸ್ನಾನದ ವಿಧಿ ಸಂಕಲ್ಪ....

ಮಮ ಇಹ ಜನ್ಮನಿ ಜನ್ಮಾಂತರೇ ಚ ಸಪ್ತವಿಧವಾಪಕ್ಷಯಾರ್ಥಂ ತೀರ್ಥ ಸ್ನಾನಂ ಕರಿಷ್ಯೇ.

ಷಷ್ಠಿ ಆಚರಣೆ ವಿಧಾನ Shastti-The 6th lunar day known as Shashti is very auspicious Where stories live. Discover now