ಅಷ್ಟಮಿ ತಿಥಿ

2 0 0
                                    

🌸🌸🌸🌸🌸🌸🌸
*ಶ್ರೀ ಭೀಷ್ಮಾಷ್ಟಮೀ*
🌸🌸🌸🌸🌸🌸🌸
20-02-2021
*ಶ್ರೀ ಭೀಷ್ಮಾಚಾರ್ಯರು ನಿರ್ಯಾಣ ಹೊಂದಿದ ದಿನ*

(ಈ ವಿಷಯವು ಶ್ರೀಮನ್ಮಹಾಭಾರತದ ಅನುಶಾಸನಿಕ ಪರ್ವದಿಂದ ಉಧೃತವಾಗಿದೆ )

ಶ್ರೀವೈಶಂಪಾಯನರು ಜನಮೇಜಯನಿಗೆ...

ರಾಜನ್! ಮಾಘ ಶುದ್ಧ ಅಷ್ಟಮಿಯಂದು ಧರ್ಮರಾಜಾದಿಗಳು ಶಾಂತನವನಿದ್ದ ರಣಭೂಮಿಗೆ ಬಂದರು.

ಶ್ರೀ ಕೃಷ್ಣ ಪರಮಾತ್ಮನೂ ಸಹ ಗಾಂಗೇಯನಿಗೆ ಅಂತ್ಯಕಾಲ ದರ್ಶನವನ್ನೀಯಬೇಕೆಂದು ಬಂದನು.

ಕೃಪ, ಧೌಮ್ಯರೂ ಬಂದರು. ಮಂತ್ರವಿದರಾದ ಯಾಜಕರು ಧೌಮರನ್ನು ಅನುಸರಿಸಿ ಬಂದರು.

ಧರ್ಮರಾಜನು ರತ್ನ - ವಸ್ತ್ರ - ಚಂದನಾಗರು - ಪುಷ್ಪ - ಫಲ - ತುಪ್ಪ - ಕುಂಭ - ಕುಶ ಮೊದಲಾದ ದ್ರವ್ಯಗಳನ್ನು ಸೇವಕರಿಂದ ಹೊರಿಸಿಕೊಂಡು ತಂದನು.

ಎಲ್ಲರೂ ಶ್ರೀ ಭೀಷ್ಮರ ಶಯನ ಸ್ಥಳಕ್ಕೆ ಸ್ವಲ್ಪ ದೂರದಲ್ಲೇ ರಥದಿಂದಿಳಿದು ನಡೆದು ಬಂದರು. ಶ್ರೀ ವ್ಯಾಸರು - ಶ್ರೀ ನಾರದರು - ಶ್ರೀ ವೇವಲರು ಪ್ರಭೃತ ಸಂಯಮೀ೦ದ್ರರು " ಭೀಷ್ಮ ನಿರ್ಯಾಣವನ್ನವಲೋಕಿಸ " ಬೇಕೆಂದು ಬಂದರು.

ಧರ್ಮರಾಜನು ವಿನಯನತಕಂಧರನಾಗಿ ಧ್ಯಾನಮಾಜ್ನ ಮಾನಸರಾಗಿದ್ದ ದೇವವ್ರತರನ್ನು ಸಮೀಪಿಸಿ...

ತಾತಾ! ಧರ್ಮಾನಂದನನು ಬಂದಿರುವೆನು. ನಮಸ್ಕರಿಸಿ ನಿನ್ನ ಆಶೀರ್ವಾದವನ್ನು ಬೇಡುತ್ತಿರುವೆನು. ಕಣ್ತೆರೆದು ನೋಡು! ಸಮಸ್ತ ಧೃತರಾಷ್ಟ್ರಾದಿ ಬಂಧು ಜನರೂ ಬಂದಿರುವರು. ಪುರ ಜನರು ಬಂದಿರುವರು. ಸದಯಹೃದಯನಾಗಿ ನಮ್ಮೆಲ್ಲರನ್ನೂ ನೋಡು! ಹಿತವನ್ನು ಉಪದೇಶಿಸು ಯೆಂದು ಪ್ರಾರ್ಥಿಸಿದನು!

ಶ್ರೀ ಭೀಷ್ಮಾಚಾರ್ಯರು ಕಣ್ತೆರೆದು ಶ್ರೀ ಕೃಷ್ಣ - ಶ್ರೀ ಭಗವಾನ್ ವ್ಯಾಸರಿಗೆ ಕೈಮುಗಿದು, ತನ್ನ ಕೈಯಿಂದ ಧರ್ಮರಾಜನ ಕೈ ಹಿಡಿದು...

ಒಳ್ಳೆಯದಾಯಿತು. ಸಮಯಕ್ಕೆ ಬಂದೆ. ರಾಜನ್! ನಿನ್ನಿಂದ ಅಭಿವಾಂಛಿತವಾದ " ಮಾಘ ಶುದ್ಧ ಅಷ್ಟಮಿ " ಯ ಪುಣ್ಯದಿನವು ಪ್ರಾಪ್ತವಾಗಿದೆ. ಶ್ರೀಶನ ರೂಪದ್ವಯದ ಸನ್ನಿಧಾನವಿದೆ. ಇನ್ನೂ ಹೆಚ್ಚಾದ ಪುಣ್ಯ ಕಾಲವೆನಗೆ ಸಿಗಲಾರದು. ನನಗೆ ಪರಲೋಕ ಗಮನಕ್ಕೆ ಅಪ್ಪಣೆ ಕೊಡಿರಿ!!

ಧೃತರಾಷ್ಟ! ಚಿಂತಿಸಬೇಡ! ಶ್ರೀ ವ್ಯಾಸಮುನಿವರರ ವರದಿಂದ ಜನಿಸಿದೆ. ವೇದ ಶಾಸ್ತ್ರ ಪರಿಜ್ಞಾನವನ್ನು ಆರ್ಜಿಸಿದೆ. ಎಲ್ಲ ಧರ್ಮಗಳನ್ನರಿತಿರುವೆ. ದೇವ ರಹಸ್ಯವನ್ನು ನಿನಗೆ ತಿಳಿಸಿದ ಸಿ ಭಗವನ್ ವೇದವ್ಯಾಸರ ವಚನವನ್ನು ನೆನೆ. ಶೋಕವನ್ನು ಬಿಡು. ಭವಿತವ್ಯವನ್ನು ಬದಲಿಸಲು ಯಾರಿಗೂ ಶಕ್ಯವಿಲ್ಲ. ಸದ್ಭಾವದಿಂದ ನೋಡು.

You've reached the end of published parts.

⏰ Last updated: Feb 20, 2021 ⏰

Add this story to your Library to get notified about new parts!

ಷಷ್ಠಿ ಆಚರಣೆ ವಿಧಾನ Shastti-The 6th lunar day known as Shashti is very auspicious Where stories live. Discover now